ಕಾಲವೊಂದಿತ್ತು, ಮಲೆನಾಡಿನ ಮುಚ್ಚಿಗೆ ಮನೆಗಳ ಜಗುಲಿಯಲ್ಲಿ ಒಂದು ಗೂಡಿರುತ್ತಿತ್ತು. ಏಕಿರಬಹುದು ಈ ಗೂಡುಗಳು? ಸದಾ ಚಿಲಿ-ಪಿಲಿ ಕಲರವ ಕೇಳಿಸುವ ಗುಬ್ಬಿಗಳಿಗಾಗಿ. ಹೀಗೆ ಸಾಮಾನ್ಯ ಎಲ್ಲರ ಮನೆಯ ಜಗಲಿಯಲ್ಲಿ ಗುಬ್ಬಿ ಸಪ್ಪಳ ಕೇಳುತ್ತಿತ್ತು. ಇನ್ನು ಮನೆಯೊಡತಿಯೋ, ಮನೆಯೊಡೆಯನೋ ಆಚೀಚೆ ಓಡಾಡುವಾಗ ಜಗುಲಿಯಲ್ಲಿ ಅಕ್ಕಿ ಬೀರುವ ಅಭ್ಯಾಸ. ಗುಬ್ಬಚ್ಚಿಗಳಿಗೇನು ಕೆಲಸ ಅಕ್ಕಿ ಹೆಕ್ಕಿ ತಿನ್ನುವುದು. ಅದೆಷ್ಟೋ ಭಾರಿ ಗುಬ್ಬಚ್ಚಿ ಮೊಟ್ಟೆಗಳಿಗಾಗಿ ಹಾವುಗಳ ಹಾವಳಿ ಮನೆಯವರಿಗಾದ ಅನುಭವಗಳಿವೆ. ಇತ್ತೀಚಿನ ದಿನಗಳಲ್ಲಿ ನಾವು ಗುಬ್ಬಚ್ಚಿಗಳನ್ನು ಅಷ್ಟೊಂದು ನೋಡುತ್ತಿಲ್ಲ. ಹಾಗಾದರೆ ಗುಬ್ಬಿಗಳೆಲ್ಲ ಎಲ್ಲಿ ಹೋದವು?
ಕಾಲ ಮುಂದುವರಿದಂತೆ, ಆಧುನಿಕತೆ ಹೆಚ್ಚಾಗುತ್ತಿದೆ. ಆಧುನಿಕತೆಯೆಡೆ ದಾಪುಗಾಲಿಡುತ್ತಿರುವ ಮಾನವನಿಗೆ ಗುಬ್ಬಚ್ಚಿ ಕಲರವ ಮರೆತೇ ಹೋಗಿದೆ. ಗುಬ್ಬಚ್ಚಿಯೊಂದೇ ಅಲ್ಲದೆ, ಮುಂಜಾನೆಯ ಕೋಳಿ ಕೂಗು, ಸುಪ್ರಭಾತ, ರೇಡಿಯೋದಲ್ಲಿ ಬರುತ್ತಿದ್ದ ಬೆಳಗಿನ ವಾರ್ತೆಗಳು, ಮನೆ ಹೊರಗೆ ಹಸುವಿಗೆ ಕುಡಿಯಲೆಂದೇ ಶೇಖರಿಸುತ್ತಿದ್ದ ಬಾನಿಯೊಳಗಿನ ನೀರು ಒಂದೇ, ಎರಡೇ? ಅವೆಲ್ಲ ಇಂದಿಗೆ ನೆನಪುಗಳಗಷ್ಟೇ ಆಗಿ ಉಳಿದಿವೆ.
ಗುಬ್ಬಚ್ಚಿಗಳು ಬರೀ ಮಲೆನಾಡು ಅಥವಾ ಭಾರತಕ್ಕಷ್ಟೇ ಸೀಮಿತವಲ್ಲದೆ, ಪ್ರಪಂಚದ ಹಲವಾರು ಭಾಗಗಳಲ್ಲಿ ನಾವು ಕಾಣಬಹುದು. ಗುಬ್ಬಚ್ಚಿ ಅಥವಾ ಸ್ಪ್ಯಾರೋಗಳಲ್ಲಿ (ಆಂಗ್ಲ ಭಾಷೆಯಲ್ಲಿ) ಹಲವಾರು ವಿಧಗಳಿವೆ. ಪ್ರದೇಶ, ವಾಸಕ್ಕನುಗುಣವಾದ ಹವಾಮಾನ ಮತ್ತು ದೇಹ ರಚನೆಗನುಗುಣವಾಗಿ ಹಲವಾರು ಹೆಸರುಗಳಲ್ಲಿ ವಿಂಗಡಿಸಲಾಗಿದೆ. ಹೌಸ್ ಸ್ಪ್ಯಾರೋ, ಇಟಾಲಿಯನ್ ಸ್ಪ್ಯಾರೋ, ಸ್ಪ್ಯಾನಿಷ್ ಸ್ಪ್ಯಾರೋ, ಸಿಂದ್ ಸ್ಪ್ಯಾರೋ, ರುಸ್ಸೆಟ್ ಸ್ಪ್ಯಾರೋ, ಡೆಡ್ ಸೀ ಸ್ಪ್ಯಾರೋ, ಕೀನ್ಯಾ ಸ್ಪ್ಯಾರೋ, ಪ್ಯಾರೋಟ್ ಬಿಲ್ಲ್ಡ್ ಸ್ಪ್ಯಾರೋ ಹೀಗೆ ಹತ್ತು ಹಲವು.
ವೈಜ್ಞಾನಿಕ ವಿಂಗಡನೆ
Kingdom: Animalia
Phylum: Chordata
Class: Aves
Order: Passeriformes
Suborder: Passeri
Infraorder: Passerida
Superfamily: Passeroidea
Family: Passeridae
ಗುಬ್ಬಚ್ಚಿಗಳ ಪ್ರಭೇದಗಳು ಈ ಕೆಳಕಂಡಂತಿವೆ:
Hypocryptadius
Cinnamon ibon
Passeridae, (true sparrows)
Saxaul sparrow, Passer ammodendri
House sparrow, Passer domesticus
Italian sparrow, Passer italiae
Spanish sparrow, Passer hispaniolensis
Sind sparrow, Passer pyrrhonotus
Somali sparrow, Passer castanopterus
Russet sparrow, Passer rutilans
Plain-backed sparrow, Passer flaveolus
Dead Sea sparrow, Passer moabiticus
Iago sparrow, Passer iagoensis
Great sparrow, Passer motitensis
Kenya sparrow, Passer rufocinctus
Kordofan sparrow, Passer cordofanicus
Shelley's sparrow, Passer shelleyi
Socotra sparrow, Passer insularis
Abd al-Kuri sparrow, Passer hemileucus
Cape sparrow, Passer melanurus
Northern grey-headed sparrow, Passer griseus
Swainson's sparrow, Passer swainsonii
Parrot-billed sparrow, Passer gongonensis
Swahili sparrow, Passer suahelicus
Southern grey-headed sparrow, Passer diffusus
Desert sparrow, Passer simplex
Eurasian tree sparrow, Passer montanus
Sudan golden sparrow, Passer luteus
Arabian golden sparrow, Passer euchlorus
Chestnut sparrow, Passer eminibey
Petronia, the petronias (rock sparrows)
Yellow-spotted petronia, Petronia pyrgita
Yellow-throated sparrow, Petronia xanthocollis
Yellow-throated petronia, Petronia superciliaris
Bush petronia, Petronia dentata
Rock sparrow, Petronia petronia
Carpospiza
Pale rockfinch, Carpospiza brachydactyla
Montifringilla, (snowfinches)
White-winged snowfinch, Montifringilla nivalis
Black-winged snowfinch, Montifringilla adamsi
White-rumped snowfinch, Montifringilla taczanowskii
Père David's snowfinch, Montifringilla davidiana
Rufous-necked snowfinch, Montifringilla ruficollis
Plain-backed snowfinch, Montifringilla blanfordi
Afghan snowfinch, Montifringilla theresae
ಸದ್ದಿಲ್ಲದೇ ಮರೆಯಾಗುತ್ತಿರುವ ಈ ಪುಟ್ಟ ಪಕ್ಷಿಗಳು ಬರೀ ಭಾರತವೊಂದೇ ಅಲ್ಲದೆ ಎಲ್ಲ ಪ್ರದೇಶಗಳಲ್ಲೂ ಮಾಯವಾಗುತ್ತಿವೆ. RSPB, UK ಹೌಸ್ ಸ್ಪ್ಯಾರೋಗಳನ್ನಂತೂ ಪ್ರಪಂಚದ ವಿನಾಶದಂಚಿನಲ್ಲಿರುವ ೩೯ ಪಕ್ಷಿಗಳ ಸಾಲಿನಲ್ಲಿ ಸೇರಿಸಿಬಿಟ್ಟಿದೆ. ಜರ್ಮನ್ ಅಧ್ಯನದ ಪ್ರಕಾರ ಹ್ಯಾಂಬರ್ಗ್ನಲ್ಲಿ ಮೂವತ್ತು ವರ್ಷಗಳೀಚೆ ಗುಬ್ಬಿಗಳ ಸಂಖ್ಯೆ ಅರ್ಧಕ್ಕಿಳಿದಿದೆ. ಹಲವಾರು ಪಕ್ಷಿಶಾಸ್ತ್ರಜ್ಞರು "Common bird goes uncommon" ಎನ್ನುವ ವಿಷಯದಡಿ ಕೆಲಸ ಮಾಡುತ್ತಿದ್ದಾರೆ. ಅಧ್ಯಯನ ಮತ್ತು ಅಧ್ಯಯನಿಗಳು ಎಷ್ಟೇ ಹೆಚ್ಚಿದರೂ ಹತ್ತಾರು ವರ್ಷಗಳೀಚೆ ಇಳಿಯುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ನಶಿಸಲು ನೂರಾರು ಕಾರಣಗಳಿರಬಹುದು ಎಂದು ಊಹಿಸಿದರೂ, ನಿಜವಾದ ಕಾರಣ ಮಾತ್ರ ಇಂದಿಗೂ ರಹಸ್ಯ.
ಅಧ್ಯಯನಗಳ ಪ್ರಕಾರ ಗುಬ್ಬಚ್ಚಿಗಳು ನಶಿಸಿಹೋಗಲು ಮುಖ್ಯ ಕಾರಣಗಳೇನು?
೧. ಅತಿಯಾದ ಕೀಟನಾಶಕಗಳ ಬಳಕೆಯಿಂದ ಗುಬ್ಬಿಗಳ ಆಹಾರ ಪೂರೈಕೆಯ ಕೊರತೆ.
೨. ಅರಣ್ಯನಾಶದಿಂದಾಗಿ ಗೂಡು ಕಟ್ಟುಲು ಸ್ಥಳದ ಕೊರತೆ.
೩. ಅತಿಯಾದ ಸೆಲ್ ಫೋನ್ ಬಳಕೆಯಿಂದುಂಟಾದ ವಿದ್ಯುತ್ಕಾಂತೀಯ ಮಾಲಿನ್ಯ (Electromagnetic Contamination)
೪. ಹೆಚ್ಚಾದ ಗುಬ್ಬಚ್ಚಿ ಪರಭಕ್ಷಕ ಪ್ರಾಣಿಗಳ ಸಂಖ್ಯೆ - ಬೆಕ್ಕು, ಗಿಡುಗ, ಹಾವು ಮುಂತಾದವುಗಳು.
೫. ಮಾನವರ ಮಣ್ಣಿನ ಮನೆಗಳಿಂದ ಸಿಮೆಂಟ್ ಕಟ್ಟಡಗಳ ವಲಸೆ.
ಕಾರಣಗಳೆಷ್ಟೇ ಇರಲಿ, ಅದರಲ್ಲಿ ಮಾನವನ ಆಧುನಿಕತೆಯಿಂದಾಗಿ ನೈಸರ್ಗಿಕ ಅಸಮತೋಲನ ಉಂಟಾಗಿರುವುದೇ ಹೆಚ್ಚು. ಮುನ್ನುಗ್ಗುತ್ತಿರುವ ಮಾನವನರಿಗೆ ಹಿಂದಾಗಿರುವುದು, ಗಳಿಸುತ್ತಿರುವ ಮಾನವರಿಗೆ ಕಳೆದುಕೊಂಡಿದ್ದು ನಿಜವಾಗಿಯೂ ತಿಳಿಯುತ್ತಿಲ್ಲ. ಇದು ಒಂದು ಮನುಷ್ಯ ಯೋಚಿಸಿ, ತೆಗೆದುಕೊಳ್ಳಬೇಕಾದ ನಿರ್ಧಾರವಲ್ಲ. ಇಡೀ ಮಾನವ ಸಂಕುಲವೇ ಹಿಂದಿರುಗಿ ನೋಡಬೇಕಿದೆ. ಇಂದು ಮಾನವನ ಅವಿವೇಕಿ ಬುದ್ದಿಯಿಂದ ಗುಬ್ಬಚ್ಚಿಗಳು ನಶಿಸುತ್ತಿವೆ, ನಾಳೆ ನಾವೇ. ಏಕೆಂದರೆ ಮೇಲೆ ತಿಳಿಸಿದ ಕಾರಣಗಳು ನಮಗೂ ಹಾನಿಕಾರಕವಲ್ಲವೇ? ಕೀಟನಾಶಕಗಳು ನಮಗೂ ಕೂಡ ವಿಷ. ಅರಣ್ಯ ನಾಶದಿಂದ ನಮಗೂ ಒಂದಲ್ಲ ಒಂದು ದಿನ ತೊಂದರೆಯಿದೆ. ಸೆಲ್ ಫೋನ್ ಬಳಕೆ ನಮ್ಮ ಜೀವ ಕೋಶಗಳ ಮೇಲೂ ಅತಿಯಾದ ಹಾನಿಯುಂಟು ಮಾಡುತ್ತವೆ. ಮುಂದುವರಿದ ನಮಗೆ ಹಿಂದಂತೂ ಹೋಗಲಸಾಧ್ಯ. ಸ್ವಲ್ಪ ಮಟ್ಟಿನ ಜಾಗ್ರತೆಯಿಂದ ನಾವು ಉಳಿದು ನಮ್ಮೊಡನಿರುವ ನಿಸರ್ಗವನ್ನೂ ಉಳಿಸಿಕೊಳ್ಳಬಹುದು.
This article was published in TimesKannada news paper http://timeskannada.com/?p=10611
No comments:
Post a Comment