ಹೆಸರೇ ಹೇಳುವಂತೆ ಇದು "ಸಾವಿರ ಸರೋವರಗಳ ನಾಡು". ಇಲ್ಲಿ ಪ್ರಕೃತಿ, ಸರೋವರಗಳ ರೂಪದಲ್ಲಿ ಬಿಂಬಿಸಲ್ಪಟ್ಟಿದೆ. ಅದುವೇ "ಫಿನ್ಲ್ಯಾಂಡ್". ಫಿನ್ಲ್ಯಾಂಡ್ ಯೂರೋಪ್ ನಲ್ಲಿರುವ ಒಂದು ದೇಶ. ವಿಸ್ತೀರ್ಣದಲ್ಲಿ ಸುಮಾರು ಮೂರು ಲಕ್ಷ square ಕಿಲೋಮೀಟರು ಇರುವ ಈ ದೇಶ, ಹೆಚ್ಚು-ಕಡಿಮೆ ೫೫ ಲಕ್ಷ ಜನ ಸಂಖ್ಯೆ ಹೊಂದಿದೆ. ಹೆಲ್ಸಿಂಕಿ ಇಲ್ಲಿನ ರಾಜಧಾನಿ. ಫಿನ್ಲ್ಯಾಂಡ್ ೧೯೧೭ ರಲ್ಲಿ ಸ್ವಾತಂತ್ರ ಪಡೆಯಿತು. ಫಿನ್ನಿಷ್ ಮತ್ತು ಸ್ವೀಡಿಷ್ ಇಲ್ಲಿನ ರಾಷ್ತ್ರೀಯ ಭಾಷೆಗಳಾದರೆ, ಸ್ಯಾಮಿ ಪ್ರಾದೇಶಿಕ ಭಾಷೆಯಾಗಿದೆ.
ಫಿನ್ಲ್ಯಾಂಡನ್ನು ಏಕೆ "ಸಾವಿರ ಸರೋವರಗಳ ನಾಡು" ಎನ್ನುತ್ತಾರೆ? : ವಿಸ್ತೀರ್ಣಕ್ಕೆ ಹೋಲಿಸಿದಾಗ ಸುಮಾರು ಒಂದೂವರೆ ಲಕ್ಷ ಸರೋವರಗಳು ಈ ದೇಶದಲ್ಲಿ ಹೆಚ್ಚಿವೆ. ಪ್ರಪಂಚದ ಇನ್ನುಳಿದ ಯಾವುದೇ ದೇಶದಲ್ಲಿ ಈ ಅನುಪಾತ ನೋಡಲಸಾಧ್ಯ. ಇದರರ್ಥ ಹೆಚ್ಚು-ಕಡಿಮೆ ಇಲ್ಲಿನ ಪ್ರತೀ ಇಪ್ಪತ್ತಾರು ಜನರಿಗೆ ಒಂದು ಸರೋವರವಿದ್ದಂತೆ. ಸರೋವರಗಳು ಸಾಮಾನ್ಯವಾಗಿ ಉತ್ತರದ Kuopio ಇಂದ ದಕ್ಷಿಣದ Lahtiವರೆಗೆ ಪಶ್ಚಿಮದ Tampere ಇಂದ ಉತ್ತರದ Punkaharju ಮತ್ತು ರಷ್ಯನ್ ಗಡಿವರೆಗೆ ಹರಡಿವೆ.
ಮತ್ತೊಂದು ವಿಸ್ಮಯದ ಸಂಗತಿಯೆಂದರೆ, ಸರೋವರಗಳೆಲ್ಲೆಲ್ಲಿವೆಯೋ ಅಲ್ಲೆಲ್ಲ ಸುಂದರ ಮರಗಳರಿರುವ ಕಾಡುಗಳು. ಫಿನ್ಲ್ಯಾಂಡನ ಕಾಡುಗಳಲ್ಲಿ pine, spruce ಮತ್ತು birch ಮರಗಳಷ್ಟೇ ಕಾಣಸಿಗುತ್ತವೆ. ಬಹುಶಃ ಪ್ರಪಂಚದಲ್ಲಿ ಫಿನ್ಲ್ಯಾಂಡ್ ಒಂದೇ ದೇಶದಲ್ಲಿ ಮಾತ್ರ ಮರಗಳು ಕಾಡಿಗೆ ಮಾತ್ರವಲ್ಲದೆ, ಸರೋವರಗಳಿಗೂ ಸೀಮಿತವಾಗಿರುವುದನ್ನು ಕಾಣಬಹುದು. ಪ್ರಪಂಚದಲ್ಲಿ ಅತೀ ಹೆಚ್ಚು ಮರಗಳಿರುವ ರಾಷ್ಟ್ರಗಳಲ್ಲಿ ಫಿನ್ಲ್ಯಾಂಡ್ ಮುಖ್ಯವಾದದ್ದು (ವಿಸ್ತೀರ್ಣ ಮತ್ತು ಮನುಷ್ಯರ ಅನುಪಾತಕ್ಕನುಗುಣವಾಗಿ). ಫಿನ್ನಿಷ್ ಸೌಂದರ್ಯ ಸರೋವರ, ಮರಗಳಲ್ಲೊಂದೇ ಅಲ್ಲದೆ ಇಲ್ಲಿನ ಮರದ ದಿನ್ನೆಗಳಿಂದ ಮಾಡಿದ ಮನೆಗಳು, ಬೇಸಿಗೆಯ ಕುಟೀರಗಳು, ದೋಣಿಗಳು, ಕರಕುಶಲ ವಸ್ತುಗಳೂ ಎತ್ತಿ ತೋರುತ್ತವೆ.
ಸಾರ್ವಜನಿಕ ಪ್ರವೇಶ ಎಲ್ಲಾ ಸರೋವರ, ಕಾಡು ಮತ್ತು ಹೊರ ಪ್ರದೇಶಗಳಿಗೆ ನೀಡಿರುವದರಿಂದ, ಇದನ್ನು "everyman's rights" ಎಂದು ಕರೆಯುತ್ತಾರೆ. ಫಿನ್ಲ್ಯಾಂಡ್ ನ ಸೌಂದರ್ಯವನ್ನು ಸವಿಯಲು ಮತ್ತೊಂದು ಆಯ್ಕೆಯೆಂದರೆ Kuopioಗೆ ಭೇಟಿ ಕೊಡುವುದು. ಇಲ್ಲಿನ ೨೪೬ ಅಡಿ ಎತ್ತರದ Puijo ಟವರ್ ಫಿನ್ಲ್ಯಾಂಡ್ ನ್ನು ವಸ್ತು ಸಂಗ್ರಹಾಲಯದ ವಸ್ತುವಿನಂತೆ ಪ್ರತಿಬಿಂಬಿಸುತ್ತದೆ. ಹಸಿರು ಕಾರ್ಪೆಟ್ಟಿನ ಮೇಲೆ ಗಾಜಿನಂತೆ ಸರೋವರಗಳು ಕಾಣುತ್ತವೆ. ಇದೊಂದು ಕಣ್ಣಿಗೆ ಮುದ ನೀಡುವ ಸ್ಥಳ.
ಇನ್ನು ವಿಸ್ತೀರ್ಣದ ಪ್ರಕಾರ ಸೂರ್ ಸೈಮಾ ಸರೋವರ ಅತೀ ದೊಡ್ಡದಾಗಿದೆ. ಇದು ಫಿನ್ಲ್ಯಾಂಡಿನ ಆಗ್ನೇಯ ಭಾಗದಲ್ಲಿದೆ. ಇದರ ವಿಸ್ತೀರ್ಣ ಸುಮಾರು ೪೪೦೦ ಸ್ಕ್ವೇರ್ ಕಿಲೋಮೀಟರ್ಗಳು. ಇದು ಯೂರೋಪಿನ ನಾಲ್ಕನೇ ದೊಡ್ಡ ಸರೋವರ ಕೂಡ. Päijänne ಸರೋವರ ಎರಡನೇ ದೊಡ್ಡ ಸರೋವರವಾಗಿದ್ದು, Inari ಮತ್ತು Pielinen ಸರೋವರಗಳು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ.
ಇನ್ನು ಈ ಪ್ರಕೃತಿ ಸೌಂದರ್ಯಕ್ಕೆ ಮುಖ್ಯ ಕಾರಣ, ಭೂಮಂಡಲದಲ್ಲಿ ಫಿನ್ಲ್ಯಾಂಡ್ ಇರುವ ಸ್ಥಳ. ಇದು ಬೋರಿಯಲ್ ವಲಯಕ್ಕೆ ಸೇರಲ್ಪಡುತ್ತದೆ. ಇಲ್ಲಿನ ಬೇಸಿಗೆ ಸಾಮಾನ್ಯದ್ದಾಗಿರುತ್ತದೆಯಾದರೂ, ಚಳಿಗಾಲ ಮಾತ್ರ ಘನ ಘೋರ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹವಾಮಾನ ವ್ಯತ್ಯಾಸ ಬಹಳಷ್ಟಿದೆ. ಫಿನ್ಲ್ಯಾಂಡ್ ಅಟ್ಲಾಂಟಿಕ್ ಸಮುದ್ರಕ್ಕೆ ಬಹಳ ಹತ್ತಿರವಿದ್ದು ಇಲ್ಲಿನ ಕೊಲ್ಲಿಗಳಿಂದಾಗಿ ಬೆಚ್ಚನೆಯ ಗಾಳಿ ಬೀಸುತ್ತಿರುತ್ತದೆ. ದಕ್ಷಿಣ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ನೂರು ದಿನಗಳ ಕಾಲ ಅತೀ ಚಳಿಗಾಲವಿರುತ್ತದೆ. ಹೆಲ್ಸಿನ್ಕಿಯಲ್ಲಿ ಸಾಮಾನ್ಯವಾಗಿ ನವೆಂಬರ್ ಕೊನೆಯಿಂದ ಮಾರ್ಚ್ ತನಕ ಹಿಮ ಬೀಳುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ -೩೦ ಡಿಗ್ರಿ ಸಿ ತನಕ ಚಳಿ ಇರುತ್ತದೆ. ಉತ್ತರ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ೨೦೦ ದಿನಗಳ ಕಾಲ ಚಳಿಗಾಲವಿರುತ್ತದೆ. ಇಲ್ಲಿ ಅಕ್ಟೋಬರ್ ಇಂದ ಮೇ ಕೊನೆಯ ತನಕ ಹಿಮ ಬೀಳುತ್ತದೆ.
ಪ್ರಯಾಣಿಕರಿಗೆ ಫಿನ್ಲ್ಯಾಂಡ್ ಒಂದು ಅದ್ಬುತ ಅನುಭವ ಕೊಡುವಂತಹ ದೇಶ. ಪ್ರಕೃತಿ ಸೌಂದರ್ಯದ ತವರೂರು. ಬೇಸಿಗೆ ಅಂತಹ ಹೆಚ್ಚಾಗಿಲ್ಲದೆ ಇರುವುದರಿಂದ ಹಲವಾರು ಕ್ರೀಡೇಗಳಿಗೆ ಕೂಡ ಆಸ್ಪದವಿದೆ. ದೂರದ ದೇಶದ ಪ್ರಯಾಣ ನಿಮ್ಮ ಕನಸಾಗಿದ್ದರೆ, ಫಿನ್ಲ್ಯಾಂಡನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.
This article was published in TimesKannada news paper http://timeskannada.com/?p=10070
No comments:
Post a Comment