Monday, August 13, 2012

ನಯನ ಮನೋಹರ... ನಯಾಗರ - NIAGARA FALLS


Niagara Falls - American view

ಅಮೇರಿಕಾ ದೇಶದ ಶೇಕಡಾ ೮೦ ರಷ್ಟು ಪ್ರವಾಸಿ ತಾಣಗಳು ಮಾನವ ನಿರ್ಮಿತ. ಇದರಲ್ಲಿ ಗುಡ್ಡ ಬೆಟ್ಟ ಜಲಪಾತಗಳೇನು ಹೊರತಲ್ಲ. ಯಾವುದೇ ನಿರ್ಮಾಣವನ್ನಾದರೂ ಅಚ್ಚುಕಟ್ಟಾಗಿ ಮಾಡಿ, ಪ್ರಕೃತಿಗೆ ಸವಾಲೊಡ್ಡುವುದರಲ್ಲಿ ಎತ್ತಿದ ಕೈ ಈ ದೇಶ. ಇಂಥಹ ದೇಶದಲ್ಲೊಂದು ಅಪರೂಪದ ಮನಮೋಹಕ ತಾಣ. ಅದುವೇ ನಿಸರ್ಗೆಯ ನಾಜೂಕು ನಾರಿಮಣಿ ನಯಾಗರ ...

ಅದು ೯೦ರ ದಶಕ. ನಾಗತೀಹಳ್ಳಿಯವರ "ಅಮೇರಿಕಾ ಅಮೇರಿಕಾ"ದ ಕಾಲವದು. ಚಲನಚಿತ್ರದ ಹಾಡಿನಲ್ಲೊಂದು ಸಾಲು, "ಜಳ ಜಳ ಜಿಗೀಯುತ ಜಾರೀ .. ಬಿಳೀದಳು ಬಳುಕುತಾ ಬಾಗಿ ... ಲೋಕಮಾನ್ಯ, ನಯಾಗರ" ಜೊತೆಗೆ ನಯಾಗರಾದ ಸಣ್ಣ ಜಲಕ್. ನಮ್ಮ ಚಿಕ್ಕಂದಿನ ನಯಾಗರ ಕಲ್ಪನೆ ಇದಿಷ್ಟೇ. ಬೆಳೆಯುತ್ತಾ ನಾವು ಎಷ್ಟೇ ನಯಾಗರಾದ ಬಗ್ಗೆ ತಿಳಿದುಕೊಂಡರೂ ಆ ಕಾಲ್ಪನಿಕ ಚಿತ್ರ ಬದಲಾಗಲಿಲ್ಲ. ಮುಂದೊಂದು ದಿನ ನೈಜವಾಗಿ ಇದನ್ನು ನೋಡುತ್ತೇನೆಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ.  
ನಯಾಗರಕ್ಕೆ ಒಮ್ಮೆ ಭೇಟಿ ಕೊಟ್ಟರೆ, ಮನಸ್ಸಿನಲ್ಲಿ ಮಾಸದ ಅದ್ಬುತ ನೆನಪಿನ ಪುಟಗಳು ಸೃಷ್ಟಿಯಾಗಿರುತ್ತವೆ. ನಯಾಗರವಿರುವುದು, ಅಮೆರಿಕಾದ ನ್ಯೂಯಾರ್ಕ್ ರಾಜ್ಯದಲ್ಲಿ. ನಯಾಗರ ಫಾಲ್ಸ್ ಅಮೇರಿಕಾ ದೇಶದ ನ್ಯೂಯಾರ್ಕ್ ರಾಜ್ಯ ಮತ್ತು ಕೆನಡಾ ದೇಶದ ಒಂಟಾರಿಯೊ ರಾಜ್ಯವನ್ನು ವಿಭಜಿಸುತ್ತದೆ. ನಯಾಗರ ಫಾಲ್ಸ್ ಒಟ್ಟು ಮೂರು ಜಲಪಾತಗಳನ್ನು ಹೊಂದಿದೆ. ಅವೆಂದರೆ ಬ್ರೈಡಲ್ ವೆಇಲ್ ಫಾಲ್ಸ್, Horseshoe ಫಾಲ್ಸ್ ಮತ್ತು American ಫಾಲ್ಸ್. Horseshoe ಫಾಲ್ಸ್ ಕೆನಡಾದಲ್ಲಿದ್ದರೆ, ಅಮೆರಿಕನ್ ಮತ್ತು ಬ್ರೈಡಲ್ ವೆಇಲ್ ಫಾಲ್ಸ್ ಗಳು ಅಮೆರಿಕಾದಲ್ಲಿವೆ. ೧೬೭ ಅಡಿ ಎತ್ತರವಿರುವ ನಯಾಗರ, ಚಳಿಗಾಲದಲ್ಲಿ ಮಂಜಿನ ಗಡ್ದೆಯಾಗಿ ಬೇಸಿಗೆಯಲ್ಲಿ ಧುಮ್ಮಿಕ್ಕಿ ಹರಿಯುವ ಸುರಲೋಕ ಸುಂದರಿ.

Niagara Falls - Night view

ಅಮೆರಿಕಾದ ಪ್ರವಾಸೋದ್ಯಮ ಇಲಾಕೆ ಪ್ರವಾಸಿಗರಿಗೆ ಅತೀ ಹತ್ತಿರದಿಂದ ಜಲಪಾತವನ್ನು ನೋಡವ ವ್ಯವಸ್ಥೆ ಒದಗಿಸಿಕೊಟ್ಟಿದೆ. ಇದರಲ್ಲಿ Maid of mist ಮತ್ತು Cave of winds ಪ್ರಮುಖವಾದವು. ಈ ಎರಡೂ ಸವಾರಿಗಳು ನಿಮ್ಮನ್ನು ಅದ್ಬುತ ಲೋಕಕ್ಕೆ ಕದ್ದೊಯ್ಯುತ್ತವೆ. ಒಟ್ಟಿನಲ್ಲಿ ನಯಾಗರ ಒಂದು ಸುಂದರ ಪ್ರಕೃತಿ ತಾಣ. ಅಮೇರಿಕಾ ದೇಶಕ್ಕೆ ನೀವೊಮ್ಮೆ ಭೇಟಿ ಕೊಟ್ಟರೆ, ನಯಾಗರ ಮರೆಯದಿರಿ.

Saturday, July 14, 2012

Canvas Painting: Free hand


Sunday, May 8, 2011

Tuesday, March 22, 2011

ನಾ ಕಂಡ NASA.

NASA Entrance
ಅದೊಂದು ನನ್ನ ಜೀವನದ ಮರೆಯಾಲಾಗದ ದಿನ. ಜೀವನದ ಅತೀ ದೊಡ್ಡ ಆಸೆ ಎಂದೇ ಹೇಳಬಹುದು.
ಪ್ರಪಂಚದ ಅತ್ಯುನ್ನತ ಸಂಶೋಧನೆಗಳೆಲ್ಲ ನಡೆಯುವುದೇ ಇಲ್ಲ್ಲಿ. ನೂರಾರು ಮಕ್ಕಳ ಕನಸು. ನೂರಾರು ವಿಜ್ಞಾನಿಗಳ ಪ್ರಯೋಗಾಲಯ. ಕೆಲವರಿಗೆ ಪ್ರವಾಸಿತಾಣವಾದರೆ, ಇನ್ನು ಕೆಲವರಿಗೆ ಪವಾಡ ನಡೆಯುವ ಕುತೂಹಲಕಾರಿ ಸ್ಥಳ. ಹೌದು, ಅದುವೇ NASA.

ನಾಸಾ 
National Aeronautics and Space Administration, ಇದೊಂದು ಅಮೆರಿಕಾದ ಏರೋಸ್ಪೇಸ್ agency. ೧೯೫೮ರಲ್ಲಿ ಅಮೆರಿಕಾದ ಅಧ್ಯಕ್ಷರಾದ ಶ್ರೀ  Dwight D. Eisenhowerರವರು  ಇದನ್ನು ಸ್ಥಾಪಿಸಿದರು. ಅಲ್ಲಿಂದ ಇಲ್ಲಿಯ ತನಕ NASA ನೂರಾರು ಆಕಾಶದಂಗಳದ ಪ್ರಯೋಗಗಳಿಗೆ ಕಾರಣವಾಗಿದೆ. ಆಗಸದಂಚಿನ ಹಲವಾರು ವಿಸ್ಮಯಗಳನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. NASAದ ಮುಖ್ಯ ಉದ್ದೇಶ ಭೂಮಿ ಹಾಗೂ ಭೂಮಿಯ ಸುತ್ತಲಿನ ಆಕಾಶಕಾಯಗಳ ಚಲನ ವಲನ, ಕುತೂಹಲಕಾರಿ ವಿಷಯಗಳ ಅನ್ವೇಷಣೆ ಮಾಡುವದಾಗಿದೆ. ಈ ನಿಟ್ಟಿನಲ್ಲಿ ಅಲ್ಲಿ ಹಲವಾರು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ನಾಸಾ ಒಂದು ವಿಸ್ಮಯಗಳ ಆಗರವಲ್ಲದೆ ಇದೊಂದು ಹಲವಾರು ಪ್ರತಿಭಾವಂತ ವಿಜ್ಞಾನಿಗಳನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

NASAದ ಕೆಲವು ಮಾನವ ಸಹಿತ ಮಹತ್ತರ ಸಾಧನೆಗಳು ಕೆಳಕಂಡಂತಿವೆ:
1.    X-15 rocket plane (1959–68)
2.    Project Mercury (1959–63)
3.    Project Apollo (1961–72)
4.    Skylab (1965–79)
5.    Apollo-Soyuz Test Project (1972-75)
6.    Space Shuttle program (1972–2011)
7.    International Space Station (1993–present)
8.    Commercial Resupply Services (2006-present)
9.    Commercial Crew Program (2010–present)
10.  Beyond Low Earth Orbit program (2010–present)

ನಾಸಾದ ಒಬ್ಬ ಪ್ರವಾಸಿಯಾಗಿ ನೀವು ಕೆಲವೊಂದು ಕುತೂಹಲಕರಿ ವಿಷಯಗಳನ್ನು ನೋಡಿ ತಿಳಿದುಕೊಳ್ಳಬಹುದು. ಇದಕ್ಕೆಂದೇ ನೀವು John F Kennedy Visitor Centerಗೆ  ಭೇಟಿ ನೀಡಬೇಕು. ಇಲ್ಲಿ  ಭೇಟಿ ನೀಡುವ ಪ್ರತಿಯೊಬ್ಬರಿಗೂ (ಮಕ್ಕಳಿಂದ ದೊಡ್ಡವರ ತನಕ) ಹಲವಾರು ಆಕಶದಂಗಳದ ವಿಸ್ಮಯಗಳು ಕಾದಿವೆ. 

ನಾಸಾದ ಒಂದು ದಿನದ ಪಾಸ್ ಪರಿಚಯಿಸಿದರೆ ಅದರಲ್ಲಿ Hubble 3D, Apollo/Saturn V Center, NASAದ  Launch Headquarters, ಎರಡು IMAX ಚಲನಚಿತ್ರದ ಟಿಕೆಟ್, Space Shuttle Atlantisನ್ನು ಒಳಗೊಂಡ ಎಲ್ಲ ತರಹದ ಪ್ರದರ್ಶನಗಳು ಮತ್ತು Astronaut Hall of Fameಗೆ ಭೇಟಿಯನ್ನೊಳಗೊಂಡಿರುತ್ತದೆ. ಮತ್ತೊಂದು ನನ್ನ ಅವಿಸ್ಮರಣೀಯ ಕ್ಷಣವೆಂದರೆ "Lunch with Astronaut", ಇದರಲ್ಲಿ ನೀವೊಬ್ಬ ಅಂತರಿಕ್ಷಯಾನಿಯೊಂದಿಗೆ ನಿಮ್ಮ ಮಧ್ಯಾಹ್ನದ ಊಟವನ್ನು ಮಾಡಬಹುದು.  ನಾನು ಶ್ರೀಯುತ Jon A. McBrideರವರನ್ನು ಭೇಟಿ ಮಾಡಿದ ಕ್ಷಣ ಅವಿಸ್ಮರಣೀಯ. ಅದೊಂದು ಮರೆಯಲಾಗದ ಅನುಭವ. 
Kennedy Space Center


Jon A. McBrideರವರೊಬ್ಬ  ಅಮೇರಿಕಾದ ಮಾಜಿ naval officer ಮತ್ತು ಮಾಜಿ ಅಂತರಿಕ್ಷಯಾನಿ. ಕೆಳಗಂಡ NASAದ ಕಾರ್ಯಗಳಲ್ಲಿ Jonರವರ ಕೆಲಸ ಶ್ಲಾಘನೀಯ:
1.    Space Shuttle Columbia
2.    Software verification in the Shuttle Avionics Integration Laboratory (SAIL), 
3.    capsule communicator (CAPCOM) for STS-5STS-6 and STS-7
4.    Flight Data File (FDF) Manager, 
5.    Orbital rendezvous procedures development.

ಒಟ್ಟಾರೆ ನನ್ನ ನಾಸಾ ಪ್ರವಾಸ ಒಂದು ಸುಂದರ ನೆನಪು. ಮರೆಯಲಾಗದ ಅನುಭವ. ನೆನಪುಗಳ ಅಲೆ ಆಕಾಶದಂಗಳದಲ್ಲಿ........ 

Sunday, September 12, 2010

ಮಲೆನಾಡಿನ ಮಳೆ....





ಬಹುಷಃ ಪ್ರತಿಯಾಬ್ಬ ಮನುಷ್ಯನಿಗೂ "ಮಲೆನಾಡು" ಎಂದರೆ ಮಳೆಯನ್ನು ಹೊರತು ಬೇರಾವ ನೆನಪು ಬರಲು ಸಾದ್ಯವಿಲ್ಲ.
ಹೌದು, ನನ್ನ ಇಂದಿನ ವಿಷಯ "ಮಲೆನಾಡ ಮಳೆ".

ಚಿಟ-ಪಟ ಸದ್ದಿನಿಂದ ಆರಂಭವಾಗಿ ಧೋ ಎಂಬ ತಾರಕಕ್ಕೇರಿ ಮತ್ತೆ ಚಿಟ-ಪಟದೊಂದಿಗೆ ಮುಕ್ತಾಯ. ಅದೊಂದು ಹೇಳಲಾರದ, ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಸುಂದರ ಪ್ರತಿಕ್ರಿಯೆ. ಮಳೆಯೇ ಹಾಗೆ ಎಂಥಹ ಕಲ್ಲು ಮನಸ್ಸಿನವರನ್ನು ಮೃದುವಾಗಿಸಿ ಬಿಡುತ್ತದೆ, ತನ್ನೊಳಗೆ ಅವರೂ ಹರ್ಷ ಪಡುವಂತೆ ಮಾಡುತ್ತದೆ. ಮನಸ್ಸು ಸೃಷ್ಟಿಯೋಡಲಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಮೊದ-ಮೊದಲ ತುಂತುರು ಮಳೆಯೊಂದಿಗೆ ಬರುವ ಆ ಮಣ್ಣಿನ ಪರಿಮಳಕ್ಕೆ ಆಧುನಿಕ ಜಗತ್ತಿನ ಯಾವೊಂದು ಪರಿಮಳ ದ್ರವ್ಯವು ಪೈಪೋಟಿ ನೀಡಲಾಗದು.

ಮಳೆ ಸುಂದರ ಪ್ರಕೃತಿಯ ವಿಶೇಷ ಪ್ರತಿಕ್ರಿಯೆಯಾದರೆ, ಮಳೆಗೆ ಮಲೆನಾಡಿನ ಜನರ ಪ್ರತಿಕ್ರಿಯೆಯೇ ಬೇರೆ. ಮಳೆಯಲ್ಲಿ ನೆನೆದು ಬಂದು ನಂತರ ಹಂಡೆಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವುದು. ಅದಾದ ಮೇಲೆ ಬೇಯಿಸಿದ ಹಲಸಿನ ಬೀಜ, ಹಲಸಿನ ಹಪ್ಪಳದೊಂದಿಗೆ ಕೈಗೂ ಬಾಯಿಗೂ ಕಚ್ಚಾಟ. ಹೊತ್ತಿಲ್ಲದ ಹೊತ್ತಿನಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗುವುದು. ಪ್ರಪಂಚದಲ್ಲಿ ಇದರಷ್ಟು ಸುಖ ಇನ್ನೊಂದಿಲ್ಲ.

ಇನ್ನು, ಮಳೆನಿಂತ ಮೇಲೆ ಹೇಳುವುದೇ ಬೇಡ, ಅದೊಂದು ವಿಭಿನ್ನ ಅನುಭವ. ಸುಂದರ ಹಸಿರು ಸೀರೆಯುಟ್ಟ ಯುವತಿಯಾಗಿರುತ್ತಾಳೆ "ನಿಸರ್ಗೆ". ಪ್ರತಿಯೊಂದು ಎಲೆಯ ಮೇಲೂ ಹನಿ ಹನಿಯಾಗಿ ಗುರುತು ಮೂಡಿಸಿಟ್ಟಿರುತ್ತಾಳೆ "ವರ್ಷಧಾರೆ".

ಆಧುನಿಕತೆ ಬೆಳೆದಂತೆ ಮನುಷ್ಯ ಮುಗ್ಧ ಪ್ರಪಂಚದಿಂದ ಪಟ್ಟಣದೆಡೆಗೆ ತನ್ನ ವಾಸ್ತವ್ಯ ಬದಲಿಸುತ್ತಿದ್ದಾನೆ. ದುರಾದೃಷ್ಟವಷತ್, ನಾವು-ನೀವು ಪ್ರತಿಯಾಬ್ಬರೂ ಆ ಮಲೆನಾಡ ವರ್ಷಧಾರೆಯ ಹರ್ಶೋದ್ಗಾರವನ್ನು ಕೇವಲ TVಯಲ್ಲಿ ವೀಕ್ಷಿಸುವಂತಾಗಿದೆ. 5 ನಿಮಿಷ ಸುರಿವ ತುಂತುರು ಮಳೆಯೊಂದಿಗೆ ನಮ್ಮ ಮನಸ್ಸು compromise ಆಗುವಂತಾಗಿದೆ. ಆದರೂ ಮಳೆ ಬರುವಾಗ ಮನಸ್ಸು ಮಲೆನಾಡ ಮಳೆಯನ್ನೇ ಯೋಚಿಸುತ್ತಿರುತ್ತದೆ,
"ಗಗನದಲಿ ಮಳೆಯದಿನ
ಗುಡುಗಿನ ತನನ
ಆ ತನನ ದಿನ ಧರಣಿಯಲಿ, ಹಸಿರಿನ ಜನನ...
ಮಲೆನಾಡಿನ ......
ಮಳೆ ಹಾಡಿನ .........
ಪಿಸುಮಾತಿನ..
ಹೊಸತನಾ... .
ಸವಿದೆನಾ ...... " ಎಂಬಂತೆ.

Saturday, July 31, 2010

ಮೌನ ಮಾತಾದಾಗ ..


ಈ ಹಾಡು ನಿನಗಾಗಿ ಸಂದೀಪ್ ..

Saturday, March 20, 2010

ಸಂದೀಪನೆಂಬ ಸುಂದರ ಸಂಜೆ....


ಒಂದು ವರ್ಷದ ಹಿಂದಿನ ಮಾತು...
ಮನದಾಳದಲ್ಲಿ ಮೂಡಿತೊಂದು ಬಹು ದೊಡ್ಡ ಪ್ರೆಶ್ನೆ ಯಾರಿವನು "ಸಂದೀಪ್"?...

ದಿನದಿಂದ ದಿನಕ್ಕೆ ಮನಸ್ಸಿನ ಪ್ರೆಶ್ನೆ ಸಡಿಲಿಸಿ... ಉತ್ತರ ನಾ ಕಂಡುಕೊಂಡೆ...

"ಸಂದೀಪ"ನೆಂದರೆ ಸಂಧ್ಯಾಕಾಲದ ಸುಂದರ ಪ್ರಕೃತಿ....
ಸೂರ್ಯ ಮುಳುಗುವ ಮುನ್ನ ಆಕಾಶವನ್ನೇ ಬಂಗಾರಮಯವಾಗಿಸಿ,
ಸುಂದರ ಸೃಷ್ಟಿಗೆ ಕೆಂಪಾದ ಮೆರುಗನ್ನು ನೀಡಿ,
ಮೋಡದಂಚಿಗೆ ಬೆಳ್ಳಿ ಗೆರೆ ಸೃಷ್ಟಿಸಿ,
ಹಕ್ಕಿಗಳ ಕಲರವದಲ್ಲಿ ತಂಪಾದ ತಂಗಾಳಿ ಬೀಸಿ,
ಸುಪ್ತ ಮನಸ್ಸನ್ನು ಸಪ್ತ ಸಮುದ್ರಗಳಾಚೆ ಕದ್ದೊಯ್ಯುವವ...

ಸಂದೀಪನೆಂದರೆ ಸುಂದರ romantic ಸಂಜೆ... ಸಂದೀಪನೆಂದರೆ "ಸಂಧ್ಯಾಕಾಲ"ದ ಪ್ರೀತಿಯ "ದೀಪ"...

"ಸಂದೀಪ"ನೆಂದರೆ ಮಲೆನಾಡಿನ ವರ್ಷಧಾರೆ...
ಆಕಾಶದಲ್ಲಿ ಮೋಡಗಳನ್ನು ಸೃಷ್ಟಿಸಿ,
ಮಿಂಚುಗಳ ಬಳ್ಳಿಗಳನ್ನು ಶೋಭಿಸಿ,
ತಂಪಾದ ಮಳೆಯನ್ನೂ ಭೂಮಿಗೆ ಸುರಿಸಿ,
ಒಣಗಿ ಹೋದ ಮಣ್ಣಿನ ಕಣಗಳಲ್ಲಿ ಪರಿಮಳವನ್ನು ಘಮಘಮಿಸಿ,
ಮನಸ್ಸು ಆ ಸುಂದರ ವಾತಾವರಣದಲ್ಲಿ ನರ್ತಿಸುವಂತೆ ಮಾಡುವವ...

ಸಂದೀಪನೆಂದರೆ "ವರ್ಷಧಾರೆ"ಯಲ್ಲಿ ಪ್ರೀತಿಯ "ಹರ್ಷಧಾರೆ" ಹರಿಸುವವ....

Tuesday, September 29, 2009

ಮಾಯಾಲೋಕದಲ್ಲಿ ಮಿಂಚಿಹೋದ ಮಿನುಗು ತಾರೆ - ಕಲ್ಪನಾ ಚಾವ್ಲಾ



ಕಲ್ಪನೆಯ ಕಲ್ಪನಾ ಲೋಕದಲ್ಲಿ ಕಲ್ಪಿಸಿದೆ ಕಲ್ಪನಾ
ನೀನಾದೆ ಜಗತ್ತಿನ ಬಹು ಜನರ ಆರಾಧನಾ
ಬಹು ಭಾರತಿಯ ಯುವ ಜನತೆಯ ಪ್ರೇರಣ
ಸಾಧನೆಗಾಗಿ ನೀ ಮುಡಿಪಿಟ್ಟೆ ನಿನ್ನ ಜೀವನ.

ಭಾರತದ ಒಂದು ಪುಟ್ಟ ಹಳ್ಳಿ ಕರ್ನಲ್ನಲ್ಲಿ ಜನನ
ಕನಸು ಕಂಡ ಕೊಲಂಬಿಯಾದಲ್ಲಿ ಮರಣ
ಭಾರತ ಕಳೆದುಕೊಂಡಿತು ನಿನ್ನಂಥ ಹೆಮ್ಮೆಯ ಮಗಳನ್ನ
ಆದರೂ ಸುನಿತಾಳ ಸಾಧನೆಗಾಗಿ ಎಲ್ಲೋ ಒಂದು ಪ್ರಾರ್ಥನಾ.

ಸಾಧನೆಗಾಗಿ ನೀ ಆರಿಸಿಕೊಂಡದ್ದು ದೂರದ ಅಮೆರಿಕಾವನ್ನ
ಅದು ನಿನಗೆ ನೀಡಿದ್ದು ನೌಕೆಯಲ್ಲಿಯ ದುರ್ಮರಣ.
ನೀ ಎಂದೂ ಮರೆಯಲಿಲ್ಲ ನಿನ್ನ ತಾಯ್ನಾಡಿನ ಮಮಕಾರವನ್ನ
ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ಬರಲಿ ನಿನ್ನಂಥ ನೂರು ಜನ ..

This Poem was awarded with second place during the "best young poet" competition by Ashwini Prakashan Gadag in 2007.