Saturday, April 27, 2013
Wednesday, February 20, 2013
ಕಾಲನ ಕರೆ ಘಂಟೆ - Tornado's
ಪ್ರಪಂಚ ಮುಂದುವರೆದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಹೆಚ್ಚುತ್ತಿವೆ. ವಿಜ್ಞಾನ ಮುಂದುವರೆದಂತೆ ಮಾನವ ಪ್ರಕೃತಿಗೆ ಸವಾಲೊಡ್ಡುವ ಭರಾಟೆಯಲ್ಲಿದ್ದಾನೆ. ಅಂತೆಯೇ ಪ್ರಕೃತಿ ವಿಕೋಪಗಳೇನು ಕಡಿಮೆಯಾಗಿಲ್ಲ. ದಿನ ಕಳೆದಂತೆ 'ಸೃಷ್ಟಿ' ಆಕೆಯಲ್ಲಾಗುತ್ತಿರುವ ಕೃತಕ ಬದಲಾವಣೆಗನುಗುಣವಾಗಿ ಪ್ರತಿಕ್ರಯಿಸುತ್ತಿದ್ದಾಳೆ. ಆ ಪ್ರತಿಕ್ರಿಯಗಳಲ್ಲಿ ಮಾನವ ಕಂಡರಿಯದ ಕೆಲ ವಿಕೋಪಗಳು ನಾವು, ನೀವು ಮರೆಯುವಂತಿಲ್ಲ. ಮರೆತರೂ, ಮನಸ್ಸು ದುಃಖಪಡುವ ಘಟನೆಗಳಲ್ಲಿ ಸುನಾಮಿ, ತೊಹೊಕು ಭೂಕಂಪ, ಟೊರ್ನೊಡೊಗಳು, ಹರ್ರಿಕೇನ್ಗಳು ಹೀಗೇ ಹತ್ತು ಹಲವು.
Tornodoಗಳ ಬಗ್ಗೆ ದಿನನಿತ್ಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ. ಹಾಗಾದರೆ ಏನಿದು Tornodo's? ಇವು ಹೇಗೆ ಹುಟ್ಟುತ್ತವೆ?
ಟೊರ್ನೊಡೊ ಒಂದು ತಿರುಗುತ್ತಿರುವ, ಗಾಳಿಯಿಂದ ಮೂಡುವ ಆಕೃತಿ. ಇದೊಂದು ಭೂಮಿಯಿಂದ ಆಗಸದಲ್ಲಿರುವ ಕಾರ್ಮೋಡದ ಮಧ್ಯ ರೌದ್ರವಾಗಿ ಸುತ್ತುವ ಗಾಳಿಯ ಆಕೃತಿ. ಇದು ಭೂಮಿಯ ಕಡಿಮೆ ಒತ್ತಡ ಇರುವಂತಹ ಭಾಗಗಳಲ್ಲಿ ಕಾಣಸಿಗುತ್ತವೆ. ಇದನ್ನು twisters ಅಥವಾ cyclones ಎಂದೂ ಕರೆಯುತ್ತಾರೆ. ಟೊರ್ನೊಡೊಗಳು ಹಲವಾರು ಘಾತ್ರ, ಆಕೃತಿಯಲ್ಲಿರುತ್ತವೆ. ಸಾಮಾನ್ಯವಾಗಿ ಇವು ಬೃಹದಾಕಾರದ ನಳಿಕೆಯ ಆಕೃತಿಯಲ್ಲಿರುತ್ತವೆ. ಇವುಗಳ ಒಂದು ಅಂತ್ಯ ಭೂಮಿಗೂ ಮತ್ತೊಂದು ಕೊನೆ ಕಾರ್ಮೊಡಗಳಿಗೂ ಅಥವಾ ಕಾರ್ಮೋಡಗಳ ಅಡಿಗೂ ಹೊಂದಿಕೊಂಡಿರುತ್ತವೆ. ಸಾಮಾನ್ಯವಾಗಿ ಟೊರ್ನೊಡೊಗಳ ಗಾಳಿಯ ವೇಗ ಘಂಟೆಗೆ ೧೧೦ ಮೈಲಿಗಿಂತ ಕಡಿಮೆ ಇರುತ್ತದೆ. ಸುಮಾರು ೨೫೦ ಅಡಿಯಷ್ಟು ಎತ್ತರವಿರುವ ಟೊರ್ನೊಡೊಗಳು ಕೊನೆಗೊಳ್ಳುವ ಮುನ್ನ ಕೆಲವಾರು ಮೈಲಿಗಳಷ್ಟು ಅಗಲವಿರುತ್ತವೆ. ಅತೀ ಭಯಾನಕ ಟೊರ್ನೊಡೊಗಳು ಸುಮಾರು ಘಂಟೆಗೆ ೩೦೦ ಮೈಲಿಗಳಷ್ಟು ಚಲಿಸುತ್ತವೆ ಮತ್ತು ಎರಡಕ್ಕಿಂತ ಹೆಚ್ಚು ಮೈಲಿ ಅಗಲವಿರುತ್ತವೆ.
ಸಾಮಾನ್ಯವಾಗಿ ನಾವು ಟೊರ್ನೊಡೊಗಳನ್ನು Antartica ಮತ್ತು North Americaಗಳಲ್ಲಿ ಹೆಚ್ಚಾಗಿ ಕಾಣಬಹುದು. ಪ್ರತಿ ವರ್ಷ ಅತೀ ಹೆಚ್ಚು ಟೊರ್ನೊಡೊಗಳು ಅಮೇರಿಕಾದ "Tornado Alley"ಯಲ್ಲಿ ಕಾಣುತ್ತೇವೆ. ಅಪರೂಪಕ್ಕೊಮ್ಮೆ South ಅಮೇರಿಕಾ, South Africa, Australia, New Zealand ಮತ್ತು ಏಷ್ಯಾದ ದಕ್ಷಿಣ, ಮಧ್ಯ ಹಾಗು ಪೂರ್ವ ಭಾಗಗಳಲ್ಲಿ ಕಾಣಬಹುದು. ಟೊರ್ನೊಡೊಗಳನ್ನು ಅವು ಮೂಡುವ ಮುನ್ನವೇ "Pulse-Doppler radar "ನ ಸಹಾಯದೊಂದಿಗೆ ಕಂಡುಹಿಡಿಯಬಹುದು. ಟೊರ್ನೊಡೊಗಳನ್ನು ಅಳೆಯಲು ಕೆಲವೊಂದು ಮಾಪನಗಳನ್ನು ಉಪಯೋಗಿಸುತ್ತಾರೆ. ಅವೆಂದರೆ "Fuji scale"(F0 to F5) ಅಥವಾ "Enhanced Fuji Scale"(EF0 to EF5), "TORRO Scale" (T0 to T11).
![]() |
| Tornado Alley |
This Article was published in Timeskannada http://timeskannada.com/?p=2576
Friday, December 7, 2012
Thursday, November 1, 2012
ನೀ ಮಿಡಿಯೆ... ನಾ ನುಡಿಯೇ... ಅದುವೇ ಜೀವನ ...
Some feelings on this earth cannot be expressed, can only be experienced..
Monday, August 13, 2012
ನಯನ ಮನೋಹರ... ನಯಾಗರ - NIAGARA FALLS
| Niagara Falls - American view |
ಅಮೇರಿಕಾ ದೇಶದ ಶೇಕಡಾ ೮೦ ರಷ್ಟು ಪ್ರವಾಸಿ ತಾಣಗಳು ಮಾನವ ನಿರ್ಮಿತ. ಇದರಲ್ಲಿ ಗುಡ್ಡ ಬೆಟ್ಟ ಜಲಪಾತಗಳೇನು ಹೊರತಲ್ಲ. ಯಾವುದೇ ನಿರ್ಮಾಣವನ್ನಾದರೂ ಅಚ್ಚುಕಟ್ಟಾಗಿ ಮಾಡಿ, ಪ್ರಕೃತಿಗೆ ಸವಾಲೊಡ್ಡುವುದರಲ್ಲಿ ಎತ್ತಿದ ಕೈ ಈ ದೇಶ. ಇಂಥಹ ದೇಶದಲ್ಲೊಂದು ಅಪರೂಪದ ಮನಮೋಹಕ ತಾಣ. ಅದುವೇ ನಿಸರ್ಗೆಯ ನಾಜೂಕು ನಾರಿಮಣಿ ನಯಾಗರ ...
ಅದು ೯೦ರ ದಶಕ. ನಾಗತೀಹಳ್ಳಿಯವರ "ಅಮೇರಿಕಾ ಅಮೇರಿಕಾ"ದ ಕಾಲವದು. ಚಲನಚಿತ್ರದ ಹಾಡಿನಲ್ಲೊಂದು ಸಾಲು, "ಜಳ ಜಳ ಜಿಗೀಯುತ ಜಾರೀ .. ಬಿಳೀದಳು ಬಳುಕುತಾ ಬಾಗಿ ... ಲೋಕಮಾನ್ಯ, ನಯಾಗರ" ಜೊತೆಗೆ ನಯಾಗರಾದ ಸಣ್ಣ ಜಲಕ್. ನಮ್ಮ ಚಿಕ್ಕಂದಿನ ನಯಾಗರ ಕಲ್ ಪನೆ ಇದಿಷ್ಟೇ. ಬೆಳೆಯುತ್ತಾ ನಾವು ಎಷ್ಟೇ ನಯಾಗರಾದ ಬಗ್ಗೆ ತಿಳಿದುಕೊಂಡರೂ ಆ ಕಾಲ್ಪನಿಕ ಚಿತ್ರ ಬದಲಾಗಲಿಲ್ಲ. ಮುಂದೊಂದು ದಿನ ನೈಜವಾಗಿ ಇದನ್ನು ನೋ ಡುತ್ತೇನೆಂದು ಕನಸಿನಲ್ಲಿಯೂ ಯೋಚಿಸಿ ರಲಿಲ್ಲ.
ನಯಾಗರಕ್ಕೆ ಒಮ್ಮೆ ಭೇಟಿ ಕೊಟ್ಟರೆ, ಮನಸ್ಸಿನಲ್ಲಿ ಮಾಸದ ಅದ್ಬುತ ನೆನಪಿನ ಪುಟಗಳು ಸೃಷ್ಟಿಯಾಗಿರುತ್ತವೆ. ನಯಾಗರವಿರುವುದು, ಅಮೆರಿಕಾದ ನ್ಯೂಯಾರ್ಕ್ ರಾಜ್ಯದಲ್ಲಿ. ನಯಾಗರ ಫಾಲ್ಸ್ ಅಮೇರಿಕಾ ದೇಶದ ನ್ಯೂಯಾರ್ಕ್ ರಾಜ್ಯ ಮತ್ತು ಕೆನಡಾ ದೇಶದ ಒಂಟಾರಿಯೊ ರಾಜ್ಯವನ್ನು ವಿಭಜಿಸುತ್ತದೆ. ನಯಾಗರ ಫಾಲ್ಸ್ ಒಟ್ಟು ಮೂರು ಜಲಪಾತಗಳನ್ನು ಹೊಂದಿದೆ. ಅವೆಂದರೆ ಬ್ರೈಡಲ್ ವೆಇಲ್ ಫಾಲ್ಸ್, Horseshoe ಫಾಲ್ಸ್ ಮತ್ತು American ಫಾಲ್ಸ್. Horseshoe ಫಾಲ್ಸ್ ಕೆನಡಾದಲ್ಲಿದ್ದರೆ, ಅಮೆರಿಕನ್ ಮತ್ತು ಬ್ರೈಡಲ್ ವೆಇಲ್ ಫಾಲ್ಸ್ ಗಳು ಅಮೆರಿಕಾದಲ್ಲಿವೆ. ೧೬೭ ಅಡಿ ಎತ್ತರವಿರುವ ನಯಾಗರ, ಚಳಿಗಾಲದಲ್ಲಿ ಮಂಜಿನ ಗಡ್ದೆಯಾಗಿ ಬೇಸಿಗೆಯಲ್ಲಿ ಧುಮ್ಮಿಕ್ಕಿ ಹರಿಯುವ ಸುರಲೋಕ ಸುಂದರಿ.
| Niagara Falls - Night view |
ಅಮೆರಿಕಾದ ಪ್ರವಾಸೋದ್ಯಮ ಇಲಾಕೆ ಪ್ರವಾಸಿಗರಿಗೆ ಅತೀ ಹತ್ತಿರದಿಂದ ಜಲಪಾತವನ್ನು ನೋಡವ ವ್ಯವಸ್ಥೆ ಒದಗಿಸಿಕೊಟ್ಟಿದೆ. ಇದರಲ್ಲಿ Maid of mist ಮತ್ತು Cave of winds ಪ್ರಮುಖವಾದವು. ಈ ಎರಡೂ ಸವಾರಿಗಳು ನಿಮ್ಮನ್ನು ಅದ್ಬುತ ಲೋಕಕ್ಕೆ ಕದ್ದೊಯ್ಯುತ್ತವೆ. ಒಟ್ಟಿನಲ್ಲಿ ನಯಾಗರ ಒಂದು ಸುಂದರ ಪ್ರಕೃತಿ ತಾಣ. ಅಮೇರಿಕಾ ದೇಶಕ್ಕೆ ನೀವೊಮ್ಮೆ ಭೇಟಿ ಕೊಟ್ಟರೆ, ನಯಾಗರ ಮರೆಯದಿರಿ.
Saturday, July 14, 2012
Friday, April 27, 2012
Wednesday, August 17, 2011
Sunday, May 8, 2011
Tuesday, March 22, 2011
ನಾ ಕಂಡ NASA.
ಪ್ರಪಂಚದ ಅತ್ಯುನ್ನತ ಸಂಶೋಧನೆಗಳೆಲ್ಲ ನಡೆಯುವುದೇ ಇಲ್ಲ್ಲಿ. ನೂರಾರು ಮಕ್ಕಳ ಕನಸು. ನೂರಾರು ವಿಜ್ಞಾನಿಗಳ ಪ್ರಯೋಗಾಲಯ. ಕೆಲವರಿಗೆ ಪ್ರವಾಸಿತಾಣವಾದರೆ, ಇನ್ನು ಕೆಲವರಿಗೆ ಪವಾಡ ನಡೆಯುವ ಕುತೂಹಲಕಾರಿ ಸ್ಥಳ. ಹೌದು, ಅದುವೇ NASA.
ನಾಸಾ National Aeronautics and Space Administration, ಇದೊಂದು ಅಮೆರಿಕಾದ ಏರೋಸ್ಪೇಸ್ agency. ೧೯೫೮ರಲ್ಲಿ ಅಮೆರಿಕಾದ ಅಧ್ಯಕ್ಷರಾದ ಶ್ರೀ Dwight D. Eisenhowerರವರು ಇದನ್ನು ಸ್ಥಾಪಿಸಿದರು. ಅಲ್ಲಿಂದ ಇಲ್ಲಿಯ ತನಕ NASA ನೂರಾರು ಆಕಾಶದಂಗಳದ ಪ್ರಯೋಗಗಳಿಗೆ ಕಾರಣವಾಗಿದೆ. ಆಗಸದಂಚಿನ ಹಲವಾರು ವಿಸ್ಮಯಗಳನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. NASAದ ಮುಖ್ಯ ಉದ್ದೇಶ ಭೂಮಿ ಹಾಗೂ ಭೂಮಿಯ ಸುತ್ತಲಿನ ಆಕಾಶಕಾಯಗಳ ಚಲನ ವಲನ, ಕುತೂಹಲಕಾರಿ ವಿಷಯಗಳ ಅನ್ವೇಷಣೆ ಮಾಡುವದಾಗಿದೆ. ಈ ನಿಟ್ಟಿನಲ್ಲಿ ಅಲ್ಲಿ ಹಲವಾರು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ನಾಸಾ ಒಂದು ವಿಸ್ಮಯಗಳ ಆಗರವಲ್ಲದೆ ಇದೊಂದು ಹಲವಾರು ಪ್ರತಿಭಾವಂತ ವಿಜ್ಞಾನಿಗಳನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
NASAದ ಕೆಲವು ಮಾನವ ಸಹಿತ ಮಹತ್ತರ ಸಾಧನೆಗಳು ಕೆಳಕಂಡಂತಿವೆ:
1. X-15 rocket plane (1959–68)
2. Project Mercury (1959–63)
3. Project Apollo (1961–72)
4. Skylab (1965–79)
5. Apollo-Soyuz Test Project (1972-75)
6. Space Shuttle program (1972–2011)
7. International Space Station (1993–present)
8. Commercial Resupply Services (2006-present)
9. Commercial Crew Program (2010–present)
10. Beyond Low Earth Orbit program (2010–present)
ನಾಸಾದ ಒಬ್ಬ ಪ್ರವಾಸಿಯಾಗಿ ನೀವು ಕೆಲವೊಂದು ಕುತೂಹಲಕರಿ ವಿಷಯಗಳನ್ನು ನೋಡಿ ತಿಳಿದುಕೊಳ್ಳಬಹುದು. ಇದಕ್ಕೆಂದೇ ನೀವು John F Kennedy Visitor Centerಗೆ ಭೇಟಿ ನೀಡಬೇಕು. ಇಲ್ಲಿ ಭೇಟಿ ನೀಡುವ ಪ್ರತಿಯೊಬ್ಬರಿಗೂ (ಮಕ್ಕಳಿಂದ ದೊಡ್ಡವರ ತನಕ) ಹಲವಾರು ಆಕಶದಂಗಳದ ವಿಸ್ಮಯಗಳು ಕಾದಿವೆ.
ನಾಸಾದ ಒಂದು ದಿನದ ಪಾಸ್ ಪರಿಚಯಿಸಿದರೆ ಅದರಲ್ಲಿ Hubble 3D, Apollo/Saturn V Center, NASAದ Launch Headquarters, ಎರಡು IMAX ಚಲನಚಿತ್ರದ ಟಿಕೆಟ್, Space Shuttle Atlantisನ್ನು ಒಳಗೊಂಡ ಎಲ್ಲ ತರಹದ ಪ್ರದರ್ಶನಗಳು ಮತ್ತು Astronaut Hall of Fameಗೆ ಭೇಟಿಯನ್ನೊಳಗೊಂಡಿರುತ್ತದೆ. ಮತ್ತೊಂದು ನನ್ನ ಅವಿಸ್ಮರಣೀಯ ಕ್ಷಣವೆಂದರೆ "Lunch with Astronaut", ಇದರಲ್ಲಿ ನೀವೊಬ್ಬ ಅಂತರಿಕ್ಷಯಾನಿಯೊಂದಿಗೆ ನಿಮ್ಮ ಮಧ್ಯಾಹ್ನದ ಊಟವನ್ನು ಮಾಡಬಹುದು. ನಾನು ಶ್ರೀಯುತ Jon A. McBrideರವರನ್ನು ಭೇಟಿ ಮಾಡಿದ ಕ್ಷಣ ಅವಿಸ್ಮರಣೀಯ. ಅದೊಂದು ಮರೆಯಲಾಗದ ಅನುಭವ.
Jon A. McBrideರವರೊಬ್ಬ ಅಮೇರಿಕಾದ ಮಾಜಿ naval officer ಮತ್ತು ಮಾಜಿ ಅಂತರಿಕ್ಷಯಾನಿ. ಕೆಳಗಂಡ NASAದ ಕಾರ್ಯಗಳಲ್ಲಿ Jonರವರ ಕೆಲಸ ಶ್ಲಾಘನೀಯ:
| Kennedy Space Center |
1. Space Shuttle Columbia,
2. Software verification in the Shuttle Avionics Integration Laboratory (SAIL),
3. capsule communicator (CAPCOM) for STS-5, STS-6 and STS-7,
4. Flight Data File (FDF) Manager,
5. Orbital rendezvous procedures development.
ಒಟ್ಟಾರೆ ನನ್ನ ನಾಸಾ ಪ್ರವಾಸ ಒಂದು ಸುಂದರ ನೆನಪು. ಮರೆಯಲಾಗದ ಅನುಭವ. ನೆನಪುಗಳ ಅಲೆ ಆಕಾಶದಂಗಳದಲ್ಲಿ........
Subscribe to:
Posts (Atom)






