ಪ್ರಪಂಚ ಮುಂದುವರೆದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಹೆಚ್ಚುತ್ತಿವೆ. ವಿಜ್ಞಾನ ಮುಂದುವರೆದಂತೆ ಮಾನವ ಪ್ರಕೃತಿಗೆ ಸವಾಲೊಡ್ಡುವ ಭರಾಟೆಯಲ್ಲಿದ್ದಾನೆ. ಅಂತೆಯೇ ಪ್ರಕೃತಿ ವಿಕೋಪಗಳೇನು ಕಡಿಮೆಯಾಗಿಲ್ಲ. ದಿನ ಕಳೆದಂತೆ 'ಸೃಷ್ಟಿ' ಆಕೆಯಲ್ಲಾಗುತ್ತಿರುವ ಕೃತಕ ಬದಲಾವಣೆಗನುಗುಣವಾಗಿ ಪ್ರತಿಕ್ರಯಿಸುತ್ತಿದ್ದಾಳೆ. ಆ ಪ್ರತಿಕ್ರಿಯಗಳಲ್ಲಿ ಮಾನವ ಕಂಡರಿಯದ ಕೆಲ ವಿಕೋಪಗಳು ನಾವು, ನೀವು ಮರೆಯುವಂತಿಲ್ಲ. ಮರೆತರೂ, ಮನಸ್ಸು ದುಃಖಪಡುವ ಘಟನೆಗಳಲ್ಲಿ ಸುನಾಮಿ, ತೊಹೊಕು ಭೂಕಂಪ, ಟೊರ್ನೊಡೊಗಳು, ಹರ್ರಿಕೇನ್ಗಳು ಹೀಗೇ ಹತ್ತು ಹಲವು.
Tornodoಗಳ ಬಗ್ಗೆ ದಿನನಿತ್ಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ. ಹಾಗಾದರೆ ಏನಿದು Tornodo's? ಇವು ಹೇಗೆ ಹುಟ್ಟುತ್ತವೆ?
ಟೊರ್ನೊಡೊ ಒಂದು ತಿರುಗುತ್ತಿರುವ, ಗಾಳಿಯಿಂದ ಮೂಡುವ ಆಕೃತಿ. ಇದೊಂದು ಭೂಮಿಯಿಂದ ಆಗಸದಲ್ಲಿರುವ ಕಾರ್ಮೋಡದ ಮಧ್ಯ ರೌದ್ರವಾಗಿ ಸುತ್ತುವ ಗಾಳಿಯ ಆಕೃತಿ. ಇದು ಭೂಮಿಯ ಕಡಿಮೆ ಒತ್ತಡ ಇರುವಂತಹ ಭಾಗಗಳಲ್ಲಿ ಕಾಣಸಿಗುತ್ತವೆ. ಇದನ್ನು twisters ಅಥವಾ cyclones ಎಂದೂ ಕರೆಯುತ್ತಾರೆ. ಟೊರ್ನೊಡೊಗಳು ಹಲವಾರು ಘಾತ್ರ, ಆಕೃತಿಯಲ್ಲಿರುತ್ತವೆ. ಸಾಮಾನ್ಯವಾಗಿ ಇವು ಬೃಹದಾಕಾರದ ನಳಿಕೆಯ ಆಕೃತಿಯಲ್ಲಿರುತ್ತವೆ. ಇವುಗಳ ಒಂದು ಅಂತ್ಯ ಭೂಮಿಗೂ ಮತ್ತೊಂದು ಕೊನೆ ಕಾರ್ಮೊಡಗಳಿಗೂ ಅಥವಾ ಕಾರ್ಮೋಡಗಳ ಅಡಿಗೂ ಹೊಂದಿಕೊಂಡಿರುತ್ತವೆ. ಸಾಮಾನ್ಯವಾಗಿ ಟೊರ್ನೊಡೊಗಳ ಗಾಳಿಯ ವೇಗ ಘಂಟೆಗೆ ೧೧೦ ಮೈಲಿಗಿಂತ ಕಡಿಮೆ ಇರುತ್ತದೆ. ಸುಮಾರು ೨೫೦ ಅಡಿಯಷ್ಟು ಎತ್ತರವಿರುವ ಟೊರ್ನೊಡೊಗಳು ಕೊನೆಗೊಳ್ಳುವ ಮುನ್ನ ಕೆಲವಾರು ಮೈಲಿಗಳಷ್ಟು ಅಗಲವಿರುತ್ತವೆ. ಅತೀ ಭಯಾನಕ ಟೊರ್ನೊಡೊಗಳು ಸುಮಾರು ಘಂಟೆಗೆ ೩೦೦ ಮೈಲಿಗಳಷ್ಟು ಚಲಿಸುತ್ತವೆ ಮತ್ತು ಎರಡಕ್ಕಿಂತ ಹೆಚ್ಚು ಮೈಲಿ ಅಗಲವಿರುತ್ತವೆ.
ಸಾಮಾನ್ಯವಾಗಿ ನಾವು ಟೊರ್ನೊಡೊಗಳನ್ನು Antartica ಮತ್ತು North Americaಗಳಲ್ಲಿ ಹೆಚ್ಚಾಗಿ ಕಾಣಬಹುದು. ಪ್ರತಿ ವರ್ಷ ಅತೀ ಹೆಚ್ಚು ಟೊರ್ನೊಡೊಗಳು ಅಮೇರಿಕಾದ "Tornado Alley"ಯಲ್ಲಿ ಕಾಣುತ್ತೇವೆ. ಅಪರೂಪಕ್ಕೊಮ್ಮೆ South ಅಮೇರಿಕಾ, South Africa, Australia, New Zealand ಮತ್ತು ಏಷ್ಯಾದ ದಕ್ಷಿಣ, ಮಧ್ಯ ಹಾಗು ಪೂರ್ವ ಭಾಗಗಳಲ್ಲಿ ಕಾಣಬಹುದು. ಟೊರ್ನೊಡೊಗಳನ್ನು ಅವು ಮೂಡುವ ಮುನ್ನವೇ "Pulse-Doppler radar "ನ ಸಹಾಯದೊಂದಿಗೆ ಕಂಡುಹಿಡಿಯಬಹುದು. ಟೊರ್ನೊಡೊಗಳನ್ನು ಅಳೆಯಲು ಕೆಲವೊಂದು ಮಾಪನಗಳನ್ನು ಉಪಯೋಗಿಸುತ್ತಾರೆ. ಅವೆಂದರೆ "Fuji scale"(F0 to F5) ಅಥವಾ "Enhanced Fuji Scale"(EF0 to EF5), "TORRO Scale" (T0 to T11).
Tornado Alley |
This Article was published in Timeskannada http://timeskannada.com/?p=2576