Friday, December 7, 2012

Canvas Painting - Vaasthu Raksha


Thursday, November 1, 2012

ನೀ ಮಿಡಿಯೆ... ನಾ ನುಡಿಯೇ... ಅದುವೇ ಜೀವನ ...



Some feelings on this earth cannot be expressed, can only be experienced..

Monday, August 13, 2012

ನಯನ ಮನೋಹರ... ನಯಾಗರ - NIAGARA FALLS


Niagara Falls - American view

ಅಮೇರಿಕಾ ದೇಶದ ಶೇಕಡಾ ೮೦ ರಷ್ಟು ಪ್ರವಾಸಿ ತಾಣಗಳು ಮಾನವ ನಿರ್ಮಿತ. ಇದರಲ್ಲಿ ಗುಡ್ಡ ಬೆಟ್ಟ ಜಲಪಾತಗಳೇನು ಹೊರತಲ್ಲ. ಯಾವುದೇ ನಿರ್ಮಾಣವನ್ನಾದರೂ ಅಚ್ಚುಕಟ್ಟಾಗಿ ಮಾಡಿ, ಪ್ರಕೃತಿಗೆ ಸವಾಲೊಡ್ಡುವುದರಲ್ಲಿ ಎತ್ತಿದ ಕೈ ಈ ದೇಶ. ಇಂಥಹ ದೇಶದಲ್ಲೊಂದು ಅಪರೂಪದ ಮನಮೋಹಕ ತಾಣ. ಅದುವೇ ನಿಸರ್ಗೆಯ ನಾಜೂಕು ನಾರಿಮಣಿ ನಯಾಗರ ...

ಅದು ೯೦ರ ದಶಕ. ನಾಗತೀಹಳ್ಳಿಯವರ "ಅಮೇರಿಕಾ ಅಮೇರಿಕಾ"ದ ಕಾಲವದು. ಚಲನಚಿತ್ರದ ಹಾಡಿನಲ್ಲೊಂದು ಸಾಲು, "ಜಳ ಜಳ ಜಿಗೀಯುತ ಜಾರೀ .. ಬಿಳೀದಳು ಬಳುಕುತಾ ಬಾಗಿ ... ಲೋಕಮಾನ್ಯ, ನಯಾಗರ" ಜೊತೆಗೆ ನಯಾಗರಾದ ಸಣ್ಣ ಜಲಕ್. ನಮ್ಮ ಚಿಕ್ಕಂದಿನ ನಯಾಗರ ಕಲ್ಪನೆ ಇದಿಷ್ಟೇ. ಬೆಳೆಯುತ್ತಾ ನಾವು ಎಷ್ಟೇ ನಯಾಗರಾದ ಬಗ್ಗೆ ತಿಳಿದುಕೊಂಡರೂ ಆ ಕಾಲ್ಪನಿಕ ಚಿತ್ರ ಬದಲಾಗಲಿಲ್ಲ. ಮುಂದೊಂದು ದಿನ ನೈಜವಾಗಿ ಇದನ್ನು ನೋಡುತ್ತೇನೆಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ.  
ನಯಾಗರಕ್ಕೆ ಒಮ್ಮೆ ಭೇಟಿ ಕೊಟ್ಟರೆ, ಮನಸ್ಸಿನಲ್ಲಿ ಮಾಸದ ಅದ್ಬುತ ನೆನಪಿನ ಪುಟಗಳು ಸೃಷ್ಟಿಯಾಗಿರುತ್ತವೆ. ನಯಾಗರವಿರುವುದು, ಅಮೆರಿಕಾದ ನ್ಯೂಯಾರ್ಕ್ ರಾಜ್ಯದಲ್ಲಿ. ನಯಾಗರ ಫಾಲ್ಸ್ ಅಮೇರಿಕಾ ದೇಶದ ನ್ಯೂಯಾರ್ಕ್ ರಾಜ್ಯ ಮತ್ತು ಕೆನಡಾ ದೇಶದ ಒಂಟಾರಿಯೊ ರಾಜ್ಯವನ್ನು ವಿಭಜಿಸುತ್ತದೆ. ನಯಾಗರ ಫಾಲ್ಸ್ ಒಟ್ಟು ಮೂರು ಜಲಪಾತಗಳನ್ನು ಹೊಂದಿದೆ. ಅವೆಂದರೆ ಬ್ರೈಡಲ್ ವೆಇಲ್ ಫಾಲ್ಸ್, Horseshoe ಫಾಲ್ಸ್ ಮತ್ತು American ಫಾಲ್ಸ್. Horseshoe ಫಾಲ್ಸ್ ಕೆನಡಾದಲ್ಲಿದ್ದರೆ, ಅಮೆರಿಕನ್ ಮತ್ತು ಬ್ರೈಡಲ್ ವೆಇಲ್ ಫಾಲ್ಸ್ ಗಳು ಅಮೆರಿಕಾದಲ್ಲಿವೆ. ೧೬೭ ಅಡಿ ಎತ್ತರವಿರುವ ನಯಾಗರ, ಚಳಿಗಾಲದಲ್ಲಿ ಮಂಜಿನ ಗಡ್ದೆಯಾಗಿ ಬೇಸಿಗೆಯಲ್ಲಿ ಧುಮ್ಮಿಕ್ಕಿ ಹರಿಯುವ ಸುರಲೋಕ ಸುಂದರಿ.

Niagara Falls - Night view

ಅಮೆರಿಕಾದ ಪ್ರವಾಸೋದ್ಯಮ ಇಲಾಕೆ ಪ್ರವಾಸಿಗರಿಗೆ ಅತೀ ಹತ್ತಿರದಿಂದ ಜಲಪಾತವನ್ನು ನೋಡವ ವ್ಯವಸ್ಥೆ ಒದಗಿಸಿಕೊಟ್ಟಿದೆ. ಇದರಲ್ಲಿ Maid of mist ಮತ್ತು Cave of winds ಪ್ರಮುಖವಾದವು. ಈ ಎರಡೂ ಸವಾರಿಗಳು ನಿಮ್ಮನ್ನು ಅದ್ಬುತ ಲೋಕಕ್ಕೆ ಕದ್ದೊಯ್ಯುತ್ತವೆ. ಒಟ್ಟಿನಲ್ಲಿ ನಯಾಗರ ಒಂದು ಸುಂದರ ಪ್ರಕೃತಿ ತಾಣ. ಅಮೇರಿಕಾ ದೇಶಕ್ಕೆ ನೀವೊಮ್ಮೆ ಭೇಟಿ ಕೊಟ್ಟರೆ, ನಯಾಗರ ಮರೆಯದಿರಿ.