Saturday, March 20, 2010

ಸಂದೀಪನೆಂಬ ಸುಂದರ ಸಂಜೆ....


ಒಂದು ವರ್ಷದ ಹಿಂದಿನ ಮಾತು...
ಮನದಾಳದಲ್ಲಿ ಮೂಡಿತೊಂದು ಬಹು ದೊಡ್ಡ ಪ್ರೆಶ್ನೆ ಯಾರಿವನು "ಸಂದೀಪ್"?...

ದಿನದಿಂದ ದಿನಕ್ಕೆ ಮನಸ್ಸಿನ ಪ್ರೆಶ್ನೆ ಸಡಿಲಿಸಿ... ಉತ್ತರ ನಾ ಕಂಡುಕೊಂಡೆ...

"ಸಂದೀಪ"ನೆಂದರೆ ಸಂಧ್ಯಾಕಾಲದ ಸುಂದರ ಪ್ರಕೃತಿ....
ಸೂರ್ಯ ಮುಳುಗುವ ಮುನ್ನ ಆಕಾಶವನ್ನೇ ಬಂಗಾರಮಯವಾಗಿಸಿ,
ಸುಂದರ ಸೃಷ್ಟಿಗೆ ಕೆಂಪಾದ ಮೆರುಗನ್ನು ನೀಡಿ,
ಮೋಡದಂಚಿಗೆ ಬೆಳ್ಳಿ ಗೆರೆ ಸೃಷ್ಟಿಸಿ,
ಹಕ್ಕಿಗಳ ಕಲರವದಲ್ಲಿ ತಂಪಾದ ತಂಗಾಳಿ ಬೀಸಿ,
ಸುಪ್ತ ಮನಸ್ಸನ್ನು ಸಪ್ತ ಸಮುದ್ರಗಳಾಚೆ ಕದ್ದೊಯ್ಯುವವ...

ಸಂದೀಪನೆಂದರೆ ಸುಂದರ romantic ಸಂಜೆ... ಸಂದೀಪನೆಂದರೆ "ಸಂಧ್ಯಾಕಾಲ"ದ ಪ್ರೀತಿಯ "ದೀಪ"...

"ಸಂದೀಪ"ನೆಂದರೆ ಮಲೆನಾಡಿನ ವರ್ಷಧಾರೆ...
ಆಕಾಶದಲ್ಲಿ ಮೋಡಗಳನ್ನು ಸೃಷ್ಟಿಸಿ,
ಮಿಂಚುಗಳ ಬಳ್ಳಿಗಳನ್ನು ಶೋಭಿಸಿ,
ತಂಪಾದ ಮಳೆಯನ್ನೂ ಭೂಮಿಗೆ ಸುರಿಸಿ,
ಒಣಗಿ ಹೋದ ಮಣ್ಣಿನ ಕಣಗಳಲ್ಲಿ ಪರಿಮಳವನ್ನು ಘಮಘಮಿಸಿ,
ಮನಸ್ಸು ಆ ಸುಂದರ ವಾತಾವರಣದಲ್ಲಿ ನರ್ತಿಸುವಂತೆ ಮಾಡುವವ...

ಸಂದೀಪನೆಂದರೆ "ವರ್ಷಧಾರೆ"ಯಲ್ಲಿ ಪ್ರೀತಿಯ "ಹರ್ಷಧಾರೆ" ಹರಿಸುವವ....